ಸಮಯೋಚಿತ ಚಾತುರ್ಯ ಮುನಿಸಿಗೊಂದು ರಹದಾರಿ : ಒಂದು ಅವಲೋಕನ
ಅನಾದಿ ಕಾಲದಿಂದಲೂ ಮುನಿಸಿಕೊಳ್ಳುವವರ ಯಶೋಗಾಥೆಗಳನ್ನು ಕೇಳುತ್ತ ಬೆಳೆದಿರುವ ನಮಗೆ ಅದರ ಪರಿಣಾಮಗಳ ಬಗ್ಗೆಯೂ ತಿಳಿದಿರುವ ವಿಷಯವೇ. ಋಷಿ ಮುನಿಗಳ ಮುನಿಸಿನ ವಿಷಯವೇನೂ ಇದಕ್ಕೆ ಹೊರತಾಗಿಲ್ಲ. ಮುನಿಸಿಕೊಂಡ ಋಷಿಗಳ ಶಾಪ ವಿಮೋಚನೆಗೆ ಸಹಸ್ರ ವರ್ಷಗಳನ್ನೇನೋ ಅದ್ಯಾವುದೋ ಸ್ಥಳ ಮತ್ತು ರೂಪವೇಶಗಳಲ್ಲಿ ಕಳೆದಿರುವಂತವರಲ್ಲಿ ಸಾಮಾನ್ಯರು, ಧರಿತ್ರಿ ಸಂಜಾತರು , ಭೂಪಾಲರು ಹಾಗೆಯೇ ದೇವತೆಗಳೇನೂ ಸೇರಿಕೊಂಡಿರುವುದಂತೂ ನಿಜವೇ ಸರಿ. ಸಹಸ್ರಾರು ವರ್ಷಗಳು ಶಾಪವಿಮೋಚನೆಗೆಯೇ ಸಂಧಿರುವ ಎಸ್ಟೋ ಸಾಕ್ಷ್ಯಗಳು ಜನಮನದಾಳದಲ್ಲಿರುವಾಗ ನಮ್ಮನಿಮ್ಮಯ ಮುನಿಸಿಗೆಲ್ಲಿಯ ಹರಿವುಯಿಲ್ಲಿ? ಅಷ್ಟಕ್ಕೂ ಕೋಪಿಸಿಕೊಳ್ಳುವುದರಲ್ಲಿ ಎಂತಹ ಸುಖಶಾಂತಿಯುಂಟು? ಪ್ರೀತಿಯನ್ನು ಹೇಗೆ ನಾಲ್ಕು ವಿವಿಧ ರೂಪದಲ್ಲಿ ಕಾಣಬಹುದೋ ಹಾಗೆಯೇ ಕೋಪಕ್ಕೂ ವ್ಯಕ್ತಪಡಿಸುವ ರೂಪಗಳಿರಬಹುದೇನೋ ಅಲ್ಲವೇ? ಹಾಗಾದರೆ ಅವ್ಯಾವುವು ? 1). ಮಗುವಿನ ಹುಸಿಗೋಪ 2). ಸಮವಯಸ್ಕರ ಮುಂಗೋಪ 3). ಮಧಾಂಧ ಕೋಪ 4). ಇರುಳುಗೋಪ ಈ ಮೇಲ್ಕಂಡ ನಾಲ್ಕರಲ್ಲಿ ಧರ್ಪದುಮ್ಮಾನದ ಮಧಾಂಧ ಕೋಪ ಎಂದಿಗೂ ವಿನಾಶಿನಂಚಿನದು ಹೇಗೆಂದರೆ ಯಾವೊಬ್ಬ ಮನುಶ್ಯನಲ್ಲಿ ಹಣ, ಅಧಿಕಾರ ಮತ್ತು ಭುಜಭಲದ ಧರ್ಪವಿರುವುದೋ ಅಂತವರ ಕೋಪ ಸದಾ ಮತ್ತೊಬ್ಬರ ಅಳಲು ಮತ್ತು ಅಳಿವಿಗೆ ಕಾರಣವಾಗುತ್ತದೆ ಆದರೆ ಒಂದಂತೂ ಸೂಕ್ಷ್ಮವಾಗಿ ಅರ್ಥೈಸಿಕೊಳ್ಳಬೇಕು ಧರ್ಪದ ...