ಮನಸ್ಸಿನ ನಿಗ್ರಹದ ಸುತ್ತ : ಒಂದು ಅವಲೋಕನ
ಎಷ್ಟೋ ವರ್ಷಗಳು ಉರುಳಿದವು ಮನಸ್ಸಿನ ಮೇಲೆ ನಿಯಂತ್ರಣ ಹೊಂದಲು ಪ್ರಯತ್ನಿಸುತ್ತ ಆದರೂ ಮನಸ್ಸಿನ ಮೂಲೆಯಲ್ಲೆಲ್ಲೋ ಒಂದು ಕೊರಗು ಇದ್ದೇ ಇರುತ್ತೆ ' ನಾನದನ್ನು ಇನ್ನೂ ಚೆನ್ನಾಗಿ ನೆರವೇರಿಸಬಹುದಾಗಿತ್ತೆಂದು'.
ಮನಸ್ಸೇ ಹಾಗೆ ಅಲ್ಲವೇ , ಇರುವುದರಲ್ಲಿ ಸಂತೋಷ ಪಡುವುದಕ್ಕಿಂತ ಇಲ್ಲದಿರುವುದನ್ನೇ ಹೆಚ್ಚು ಬಯಸುವುದು. ಸಾಕಷ್ಟು ಸಲ ಮನಸ್ಸನ್ನು ಶಾಂತವಾಗಿ ಇರಿಸಲು ಪ್ರಯತ್ನಿಸಿದಾಗ್ಯೂ ಮನಃಸ್ಪೂರ್ತಿ ಸಂತೋಷಪಡಲು ಆಗುವುದಿಲ್ಲ ಕಾರಣವು ತಿಳಿದಿರುವ ವಿಷಯವೇ . ಹಾಗಾದರೆ ಮನಸ್ಸನ್ನು ಹಿಡಿತದಲ್ಲಿಟ್ಟಿರಲು ಏನು ಮಾಡಬೇಕೆಂದು ನಾನು ನನ್ನ ಮನಸ್ಸನ್ನೇ ಕೇಳಿಕೊಂಡೆ. ಮನಸ್ಸಿನ ಸಲಹೆಯ ಮೆರೆಗೆಯೇ ಎಷ್ಟೋ ಪ್ರಯತ್ನಗಳ ನಂತರ ಕಂಡುಕೊಂಡ ಉತ್ತರವೂ ಅಷ್ಟೇ ಕಠಿಣವಾಗಿತ್ತು. ಮನಸ್ಸಿನ ನಿಗ್ರಹ ಅಷ್ಟೊಂದು ಸುಲಭವೇ?
" ಜೀವನದಲ್ಲಿ ಏನಾದರೂ ಸಾಧಿಸಬೇಕೆಂದರೆ ಅದು ಸ್ವಮನಸ್ಸಿನ ಮೇಲೆ ವಿಜಯ ಸಾಧಿಸುವುದು " ಎಂಬುದು ಮೂಲ ಮಂತ್ರವಾದಾಗಲೇ ಮನಸ್ಸನ್ನು ನಿಗ್ರಹಿಸಬಹುದೇನೋ ಎಂದು ತಿಳಿದುಕೊಳ್ಳುವ ಸಮಯಕ್ಕೆ ಅರ್ಧ ಆಯಸ್ಸು ಕಳೆದುಹೋಗಿರುತ್ತೆ ಅಷ್ಟೇ. ಇತಿಹ್ಯಗಳನ್ನು ಮೆಲುಕು ಹಾಕಿದರೂ ಸಹ ಸಹಸ್ರಾರು ವರ್ಷಗಳೇ ಉರುಳಿ ಹೋಗಿರುವ ಪುರಾವೆಗಳು ಸಿಗುವವು ಮನಸ್ಸಿನ ನಿಗ್ರಹಕ್ಕೆ ಗತಿಸಿದ ಸಮಯ ಎಂದು. ಇಂತಹುದರಲ್ಲಿ ಈಗಿನ ಸರಾಸರಿ ಆಯುಷ್ಯವೇ 60 ಸಂವಸ್ತರಗಳಿರುವಾಗ ಇನ್ನೆಲ್ಲಿಯ ಸಹಸ್ರ ವರ್ಷಗಳ ಮಾತು.
ಒಂದೇ ಸುಲಭವಾದ ಪ್ರಯತ್ನವೆಂದರೆ ಆದಷ್ಟು ಇದ್ದುದರಲ್ಲೇ ಶಾಂತಿಯನ್ನು ಅರಸುವುದು ಹಾಗೂ ಅದರಲ್ಲೇ ಸುಖ ನೆಮ್ಮದಿಯನ್ನು ಕಂಡುಕೊಳ್ಳುವುದು..
ಡಾ|| ಸಿ ಬಿ. ಪಾಟೀಲ
Comments
Post a Comment