ಸಮಯೋಚಿತ ಚಾತುರ್ಯ ಮುನಿಸಿಗೊಂದು ರಹದಾರಿ : ಒಂದು ಅವಲೋಕನ

ಅನಾದಿ ಕಾಲದಿಂದಲೂ ಮುನಿಸಿಕೊಳ್ಳುವವರ ಯಶೋಗಾಥೆಗಳನ್ನು ಕೇಳುತ್ತ ಬೆಳೆದಿರುವ ನಮಗೆ ಅದರ ಪರಿಣಾಮಗಳ ಬಗ್ಗೆಯೂ ತಿಳಿದಿರುವ ವಿಷಯವೇ. 
ಋಷಿ ಮುನಿಗಳ ಮುನಿಸಿನ ವಿಷಯವೇನೂ ಇದಕ್ಕೆ ಹೊರತಾಗಿಲ್ಲ. ಮುನಿಸಿಕೊಂಡ ಋಷಿಗಳ ಶಾಪ ವಿಮೋಚನೆಗೆ ಸಹಸ್ರ ವರ್ಷಗಳನ್ನೇನೋ ಅದ್ಯಾವುದೋ ಸ್ಥಳ ಮತ್ತು ರೂಪವೇಶಗಳಲ್ಲಿ ಕಳೆದಿರುವಂತವರಲ್ಲಿ  ಸಾಮಾನ್ಯರು, ಧರಿತ್ರಿ ಸಂಜಾತರು , ಭೂಪಾಲರು ಹಾಗೆಯೇ ದೇವತೆಗಳೇನೂ ಸೇರಿಕೊಂಡಿರುವುದಂತೂ ನಿಜವೇ ಸರಿ. ಸಹಸ್ರಾರು ವರ್ಷಗಳು ಶಾಪವಿಮೋಚನೆಗೆಯೇ ಸಂಧಿರುವ ಎಸ್ಟೋ ಸಾಕ್ಷ್ಯಗಳು ಜನಮನದಾಳದಲ್ಲಿರುವಾಗ ನಮ್ಮನಿಮ್ಮಯ  ಮುನಿಸಿಗೆಲ್ಲಿಯ ಹರಿವುಯಿಲ್ಲಿ?  
ಅಷ್ಟಕ್ಕೂ ಕೋಪಿಸಿಕೊಳ್ಳುವುದರಲ್ಲಿ ಎಂತಹ ಸುಖಶಾಂತಿಯುಂಟು? 
  ಪ್ರೀತಿಯನ್ನು ಹೇಗೆ ನಾಲ್ಕು ವಿವಿಧ ರೂಪದಲ್ಲಿ ಕಾಣಬಹುದೋ ಹಾಗೆಯೇ ಕೋಪಕ್ಕೂ ವ್ಯಕ್ತಪಡಿಸುವ ರೂಪಗಳಿರಬಹುದೇನೋ ಅಲ್ಲವೇ? ಹಾಗಾದರೆ ಅವ್ಯಾವುವು ?
1). ಮಗುವಿನ ಹುಸಿಗೋಪ  2). ಸಮವಯಸ್ಕರ ಮುಂಗೋಪ   3). ಮಧಾಂಧ ಕೋಪ
 4). ಇರುಳುಗೋಪ 
ಈ ಮೇಲ್ಕಂಡ ನಾಲ್ಕರಲ್ಲಿ ಧರ್ಪದುಮ್ಮಾನದ ಮಧಾಂಧ ಕೋಪ ಎಂದಿಗೂ ವಿನಾಶಿನಂಚಿನದು ಹೇಗೆಂದರೆ ಯಾವೊಬ್ಬ ಮನುಶ್ಯನಲ್ಲಿ ಹಣ, ಅಧಿಕಾರ ಮತ್ತು ಭುಜಭಲದ ಧರ್ಪವಿರುವುದೋ ಅಂತವರ ಕೋಪ ಸದಾ ಮತ್ತೊಬ್ಬರ ಅಳಲು ಮತ್ತು ಅಳಿವಿಗೆ ಕಾರಣವಾಗುತ್ತದೆ ಆದರೆ ಒಂದಂತೂ ಸೂಕ್ಷ್ಮವಾಗಿ ಅರ್ಥೈಸಿಕೊಳ್ಳಬೇಕು ಧರ್ಪದ ಕೋಪವನ್ನು ಯಾರು ಸರಿಯಾಗಿ ವಿನಿಯೋಗಿಸಿಕೊಳ್ಳುವರೊ ಅವರು ಆತ್ಮಾಭಿಮಾನದ ಉತ್ತುಂಗಕ್ಕೇರುವರು.
 ಇನ್ನುಳಿದ ಮೂರು ವಿಧದ ಕೋಪಗಳಂತೂ ಹೇಳಲಿಕ್ಕೆ ಹೊರತು ಅನುಭವಿಸಲಿಕ್ಕಲ್ಲ. ಮಕ್ಕಳ ಹುಸಿಗೋಪ ಯಾವತ್ತೂ ಮನಸ್ಸಿಗಹ್ಲಾದಕರವಾಗಿರುತ್ತೆ, ಸ್ನೇಹಿತನ ಮುಂಗೋಪ ಕಾಳಜಿಯನ್ನು ತುಂಬಿಕೊಂಡಿರುತ್ತೆ ಹಾಗೆಯೇ ಹಿರಿಯರ ಇರುಳುಗೋಪ ಸನ್ಮಾರ್ಗದ ಸುಖಾಂತ್ಯಕ್ಕೆ ಕಾರಣೀಭೂತವಾಗಿರುತ್ತದೆ ಮತ್ತು ಏಳ್ಗೆಯನ್ನೇ ಪ್ರತಿಫಲಪ್ರಸಾದವನ್ನಾಗಿಸುತ್ತದೆ ಹಾಗಾದರೆ ಇಂತಹ ಚಿಕ್ಕ ವಿಷಯಗಳಿಗೆ ನಾವೇಕೆ ನಿಷ್ಟುರರಾಗಬೇಕು ಮತ್ತು ಜೀವನದ ಬೆಲೆಬಾಳುವ ಸಂತೋಷದ ಕ್ಷಣಗಳನ್ನು ಹಳಸಲು ಬಿಡಬೇಕು? 
  ಕ್ಷಣಿಕ ಸಮಯದ ಕೋಪ ಮುಂಬರುವ ಅಮೃತಘಳಿಗೆಗಳನ್ನು ಆವರಿಸಿ ವಿಷಘಳಿಗೆಗಳನ್ನಾಗಿ ಮಾಡುವ ಕ್ಷಮತೆಯನ್ನು ಹೊಂದಿರಬೇಕಾದ್ದಲ್ಲಿ ,ಕೋಪವನ್ನು ನಿಯಂತ್ರಿಸಿ ಬುದ್ಧಿಮತ್ತೆಯನ್ನು ಮೆರೆಯುವುದೇ ಮೇಲಲ್ಲವೇ? 
 ಆತ್ಮಸಾಕ್ಷಿಯೇನೋ ತಿರುಗಿಬೀಳದೆ ಇರಲೊಪ್ಪದು ಆದರೆ ಸಮಯಕ್ಕೆ ಸಮಂಜಸವಾದ ಚಾತುರ್ಯದ ನಿರ್ಣಯ ಎಷ್ಟೋ ಅನಾಹುತಗಳನ್ನು ತಪ್ಪಿಸಿಕೊಳ್ಳಲಂತೂ ಸಹಕರಿಸುತ್ತದೆ. ಅದಕ್ಕೆ ಹೇಳುವುದೇನೋ 
' ಅಕ್ರೋಧೇನ ಜಯೇತ್ ಕ್ರೋಧಮಸಾಧುo ಸಾಧುನಾ ಜಯೇತ್ |
ಜಯೇತ್ ಕದರ್ಯo ದಾನೆನ, ಜಯೇತ್ ಸತ್ಯೇನ್ ಚಾನೃತo ||

ಸಮವಯಸ್ಕಮನಸ್ಕರಲ್ಲಿ ನನ್ನದೊಂದು ಬಿನ್ನಹ   " ಆದಷ್ಟು ಮನಃಶಾಂತಿಯನ್ನು ಸಾಧಿಸಲು ಪ್ರಯತ್ನಿಸಿ ಅದೇ ನಿಮಗೆ ಕೋಪವನ್ನು ಹತೋಟಿಯಲ್ಲಿಡಲು ಮಾರ್ಗಸೂಚಿಯಾಗುವುದು".

ಡಾ||. ಸಿ ಬಿ.ಪಾಟೀಲ

  
   

Comments